top of page

ನಾವು ಕ್ಯಾಲೆಂಡರ್ ಮಾಡಿದ್ದು ಹೇಗೆ

ಎರಡು ಮೂಲ ತತ್ವದ ಅನುಸಾರವಾಗಿ ‘ ನಿಮ್ಮ ಮೀನನ್ನು ಆಯ್ದುಕೊಳ್ಳಿ ‘ ಎಂಬ ಕ್ಯಾಲೆಂಡರ್ ಮಾಡಲಾಗಿದೆ. 

೧. ಮೀನುಗಳ ಸಂತಾನೋತ್ಪತ್ತಿ ಸಮಯದಲ್ಲಿ , ಆ ಮೀನನ್ನು ತಿನ್ನದಿರುವುದು. 

೨. ಮೀನುಗಳ ಬೇಟೆಯ ಪರಿಣಾಮ ಆಗುವ ಹಾನಿಗಳ ಕುರಿತು ಮಾಹಿತಿಗಳನ್ನು ಸಂಯೋಜನೆ ಮಾಡುವುದು.

ಯಾವುದೇ ಪ್ರಾಣಿಗಾದರೂ , ಸಂತಾನೋತ್ಪತ್ತಿ ಸಮಯ ತಮ್ಮ ಜೀವನದ ನಿರ್ಣಾಯಕ ಸಮಯ. ಮೀನುಗಳು ಮತ್ತು ಸಮುದ್ರದ ಇತರೆ ಜೀವಿಗಳಿಗೂ ಇದು ಅನ್ವಯವಾಗುತ್ತದೆ. ಸಂತಾನೋತ್ಪತ್ತಿ ಸಮಯದಲ್ಲಿ ವಯಸ್ಕ ಮೀನುಗಳು ಮಿಲನಗೊಂಡು ಮೊಟ್ಟೆಗಳನ್ನಿಡುತ್ತವೆ ಅಥವಾ  ಮರಿಗಳಿಗೆ ಜನ್ಮ ನೀಡುತ್ತವೆ. ಈ ಸಮಯದಲ್ಲಿ ಮೀನುಗಾರಿಕೆಯಾದಾಗ ಅವುಗಳ ಸಂತತಿಗೇ  ಕಡಿವಾಣಹಾಕಿದಂತಾಗುತ್ತದೆ. ನಾವು ಜವಾಬ್ಧಾರಿಯುತವಾಗಿ ಮೀನನ್ನು ತಿನ್ನುವುದಾದರೆ ಈ ವಿಷಯಗಳು ನಿಮಗರಿವಿರಲಿ.

ಅ)

ಸಂತಾನೋತ್ಪತ್ತಿ ಸಮಯದಲ್ಲಿ ನಾವು ತಿನ್ನುವ ಮೀನನ್ನು ಹಿಡಿಯಬಾರದು.

ಆ)

ಸಂತಾನೋತ್ಪತ್ತಿ ಸಮಯದಲ್ಲಿ ಮೀನಿಗೆ ಅತಿಯಾದ ಬೇಡಿಕೆ ಇರದಂತೆ ನೋಡಿಕೊಳ್ಳಬೇಕು.

ಇ)

ನಾವು ಮೀನಿನ ಸಂತಾನೋತ್ಪತ್ತಿ ಸಮಯದಲ್ಲಿ ಆದಷ್ಟು ತಿನ್ನದಿರೋಣ

ನಾವು ನಮ್ಮ ಕ್ಯಾಲೆಂಡರ್ ನಲ್ಲಿ ನಮೂದಿಸಿರುವ  ಕಿಂಗ್ ಫಿಶ್ ಎಂಬ ಮೀನಿನ  ಉದಾಹರಣೆಯ ಮೂಲಕ ವಿವರಣೆ ಪಡೆಯೋಣ.

Kingfish.png

ಕಿಂಗ್ ಫಿಶ್, ಮಾರ್ಚ್ , ಏಪ್ರಿಲ್, ಮೇ ತಿಂಗಳಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ. ನಮ್ಮ ಒಳ ಅರಿವಿನಿಂದ ಈ ತಿಂಗಳುಗಳಲ್ಲಿ ಈ  ಪ್ರಭೇದದ ಮೀನನ್ನು ತಿನ್ನುವುದನ್ನು ಬಿಡಬೇಕು.

No fish.png

Avoid Months:

Mar, Apr, May

ನಮ್ಮ ಶಿಫಾರಸ್ಸು ನಿಮಗೆ ಅರ್ಥವಾಯಿತು ಎಂದುಕೊಳ್ಳೋಣ . ಆದರೆ  ಅಷ್ಟು ಸಾಕೆ ?

ಕಿಂಗ್ ಫಿಶ್ ಅನ್ನು ದೊಡ್ಡ ಬಲೆಯ  ಮೂಲಕ ಹಿಡಿಯುತ್ತಾರೆ ಎಂದು ನಮಗೆ ಗೊತ್ತಿದೆ. ಈ ದೊಡ್ಡ ಬಲೆಯು ವುಲ್ಫ್ ಹೆರಿಂಗ್ , ಬರ್ರಮುಂಡಿ ,ಗ್ರೌಪರ್ಸ್ ಕೋಬಿಯಾ, ಕೋಸ್ಟಲ್ ಶಾರ್ಕ್, ಡಾಲ್ಫಿನ್ ಮೀನು, ಸ್ಕಿಪ್ ಜ್ಯಾಕ್ ಟ್ಯೂನಾ , ಎಲ್ಲೊಫಿನ್ ಟ್ಯೂನಾ ಮತ್ತು ಕ್ಯಾಟ್ಫಿಶ್ ಗಳನ್ನು ಕೂಡಾ ಹಿಡುಯುತ್ತದೆ.

Large Gillnet, Hook and Line

Dominant Gear Type:

ನಾವು ಕಿಂಗ್ ಫಿಶ್ ಅನ್ನು ಜವಾಬ್ಧಾರಿಯುತವಾಗಿ ತಿನ್ನುವುದಾದರೆ , ದೊಡ್ಡ ಬಲೆಗಳಿಂದ  ಸಮುದ್ರದಲ್ಲಿನ , ಮೇಲೆ ನಮೂದಿಸಿದ ಮೀನುಗಳಿಗೆ ಆಗುವ ಹಾನಿಯನ್ನೂ  ತಪ್ಪಿಸಬೇಕು . ಹಾಗಾಗಿ  ಕಿಂಗ್ ಫಿಶ್ನ  ಸಂತಾನೋತ್ಪತ್ತಿ ಕಾಲವಾದ ಮಾರ್ಚ್, ಏಪ್ರಿಲ್ ಮತ್ತು ಮೇನಲ್ಲಿ ಮಾತ್ರ  ತಿನ್ನುವುದು ಬಿಟ್ಟರೆ ಸಾಲದು.

ನಾವು  ಕಿಂಗ್ ಫಿಶ್ ನೊಂದಿಗೆ  ಹಿಡಿಯಲ್ಪಡುವ ಇತರೆ ಮೀನುಗಳ ಸಂತಾನೋತ್ಪತ್ತಿ ಕಾಲದಲ್ಲೂ ತಿನ್ನದಿದ್ದರೆ ಒಳಿತು. ಮೇಲೆ ಹೆಸರಿಸಿದ ಹೆಚ್ಚಿನ ಮೀನುಗಳು ಜನವರಿಯಿಂದ ಮೇ ವರೆಗೆ ಸಂತಾನೋತ್ಪತ್ತಿಯಲ್ಲಿ ತೊಡಗಿರುತ್ತವೆ. ವುಲ್ಫ್ ಹೆರಿಂಗ್ಸ್ ಮಾತ್ರ ಅಕ್ಟೊಬರದಲ್ಲಿ ಸಂತಾನೋತ್ಪತ್ತಿ ಮಾಡುತ್ತದೆ.

No fish.png

Avoid Months:

Mar, Apr, May, Jan, Feb, Oct

ಸಂತಾನೋತ್ಪತ್ತಿ ಮತ್ತು ಮೀನುಗಾರಿಕೆಯಿಂದ  ಸಮುದ್ರದ ಮೇಲಾಗುವ ಒತ್ತಡವನ್ನು ಗಮನಹರಿಸಿ  ನಾವು ಜೂನ್ ತಿಂಗಳಿಂದ ಸೆಪ್ಟೆಂಬರ್ ತಿಂಗಳವರೆಗೂ ಮತ್ತು ನವಂಬರ, ಡಿಸೆಂಬರ್  ತಿಂಗಳಲ್ಲಿ ಕಿಂಗ್ ಫಿಶ್ ಅನ್ನು ತಿನ್ನಬಹುದು ಎಂದು ಶಿಫಾರಸ್ಸು ಮಾಡುತ್ತೇವೆ.

Preferred Months:

Jun, Jul, Aug, Sep, Nov, Dec

Scroll.in ಎಂಬಲ್ಲಿ “ ನಿಮ್ಮ ಮೀನಿನ ಬಗ್ಗೆ ತಿಳಿದುಕೊಳ್ಳಿ “ ಎಂಬ ಕಿರು ಸಾಕ್ಷ ಚಿತ್ರವನ್ನು ಮಾಡಿದ್ದಾರೆ. ಅದರಲ್ಲಿ ಹೇಗೆ ಗ್ರಾಹಕರೇ ಸಮುದ್ರದ ಮೇಲೆ ಆಗುವ ಒತ್ತಡಕ್ಕೆ ನೇರ ಕಾರಣವೆಂದು ವಿವರಿಸಿದ್ದಾರೆ. ನಮ್ಮ ಸಮುದ್ರದ  ಮೀನಿನ ಆಯ್ಕೆ ನೇರ ಸಮುದ್ರದ ಮೇಲೆಯೇ ಪರಿಣಾಮ ಬೀರಬಹುದು.

ನಮ್ಮಕ್ಯಾಲೆಂಡರ್ನಲ್ಲಿ, ಮೀನಿನ ಆಯ್ಕೆಯನ್ನು ಹೇಳಬೇಕಾದರೆ  ಮೇಲಿನ  ಎಲ್ಲಾ ಶಿಫಾರಸ್ಸುಗಳನ್ನು ತೆಗೆದುಕೊಂಡಿದ್ದೇವೆ.

ನಮ್ಮ ಶಿಫಾರಸ್ಸಿನ ಮೇಲೆ ನಿಮಗೆ ಕುತೂಹಲವಿದ್ದಲ್ಲಿ ಈ ಕೊಂಡಿಯನ್ನು ಒತ್ತಿ.

 

ಈ ಡೇಟಾಬೇಸ್ ಅನೇಕ ಪ್ರಕಟಣೆಗಳನ್ನು ಉಲ್ಲೇಖಿಸಿ ಮಾಡಲಾಗಿದೆ.

 

ಪ್ರತಿಯೊಂದು ಮೀನಿನ ಶಿಫಾರಸ್ಸನ್ನು ನೀವು ಕೂಲಂಕುಷವಾಗಿ ಗಮನಿಸಿ ಅದರ ಬಗೆಗೆ ನಿಮ್ಮ ಅನಿಸಿಕೆ, ಮಾರ್ಪಾಡು ಮತ್ತು ಶಿಫಾರಸ್ಸನ್ನು ಮುಕ್ತವಾಗಿ ಹಂಚಿಕೊಳ್ಳಿ

Open-Access-logo.jpg
bottom of page