top of page

ಸಾಮಾನವಾಗಿ ಕೇಳಲಾಗುವ ಪ್ರಶ್ನೆಗಳು

Q.

ಸಮುದ್ರ ಉತ್ಪನ್ನಗಳನ್ನು ಸೇವಿಸುವ  ಗ್ರಾಹಕರಿಗೆ ಮನವರಿಕೆ ಮಾಡುವಬದಲು ನೇರ  ಮೀನುಗಾರರಿಗೇ ಈ ವಿಷಯದ ಬಗ್ಗೆ ಮನವರಿಕೆ ಮಾಡಬಹುದಲ್ಲಾ?

A.

ನಾವಿದನ್ನು ಇನ್ನಷ್ಟು ಅರ್ಥ ಮಾಡಿಕೊಳ್ಳಲು , ಮೊದಲು ಮೀನುಗಾರಿಕೆಯ ಚರಿತ್ರೆಯನ್ನು ತಿಳಿದುಕೊಳ್ಳಬೇಕು .

 

ಭಾರತದ ಸ್ವಾತಂತ್ರ್ಯದ ನಂತರ ಮೀನುಗಾರಿಕೆಯನ್ನು ಆಹಾರ ಭದ್ರತೆ, ಉದ್ಯೋಗ  ಮತ್ತು ಆರ್ಥಿಕತೆಯ ಮುಖ್ಯ ಆಧಾರದಲ್ಲಿ ಒಂದಾಗಿ ನೋಡಲಾಯಿತು. ಹಾಗಾಗಿ ಸರಕಾರಗಳು ಕೂಡಾ ಮೀನುಗಾರಿಕೆಯನ್ನು ಉದ್ಯೋಗವಾಗಿ ಆರಿಸಿಕೊಳ್ಳಲು ಪ್ರೋತ್ಸಾಹಿಸಿತು. ಮೀನುಗಾರಿಕಾ ದೋಣಿ, ಮೀನುಗಾರಿಕೆಗೆ ಬೇಕಾದ ಇಂಧನ ಇತ್ಯಾದಿಗಳಿಗೆ ಸರಕಾರಗಳೇ ಸಹಾಯ ಧನವನ್ನೂ  ಕೊಡಲಾರಂಭಿಸಿತು. ಮೀನುಗಾರಿಕೆಯನ್ನು ಉತ್ತೇಜಿಸಲು , ಅಪಾಯಕಾರಿ ಮೀನುಗಾರಿಕಾ ತಂತ್ರವಾದ ಟ್ರಾವ್ಲಿಂಗ್  ಅನ್ನು ಪರಿಚಯಿಸಿದ್ದೂ ಅಲ್ಲದೆ, ಅದಕ್ಕೆ ಪ್ರೋತ್ರಾಹ ಧನವನ್ನೂ  ನೀಡಲಾಯಿತು.

 

1990 ರ ಹೊತ್ತಿಗೆ ಸಮುದ್ರದ ಮೀನುಗಾರಿಕೆಯ ಬೆಳವಣಿಗೆ ಕುಂಠಿತವಾಯಿತು ಮತ್ತು ಮೀನುಗಾರಿಕೆಯಿಂದ ನಷ್ಟವಾಗುತ್ತಿತ್ತು. ಮೀನುಗಾರು ಸಹಾಯಧನದಿಂದಾಗಿಯೇ ಜೀವನ ಸಾಗಿಸುತ್ತಿದ್ದರು.  ಅಂದಾಜು ನಾಲ್ಕು ಮಿಲಿಯ ಮೀನುಗಾರಿರಿಗೆ( National policy for Marine Fisheries 2017) ಅವರೇ ಹಿಡಿಯುವ ಮೀನುಗಳ ಪ್ರಮಾಣದಿಂದ ಜೀವನ ಸಾಗಿಸಲು ಸಾಧ್ಯವಾಗುವುದಿಲ್ಲ . ಮೀನುಗಾರಿಕೆಯಿಂದ ಭಾರೀ  ಪ್ರಮಾಣದಲ್ಲಿ ಹಣವೂ  ಉತ್ಪಾದನೆಯಾಗುತ್ತಿಲ್ಲ.

 ಮೀನುಗಾರಿಕೆಯನ್ನೇ ನೆಚ್ಚಿಕೊಂಡಿರುವ ಕರಾವಳಿಯ ಮೀನುಗಾರರಿಗೆ, ಮೀನು ಹಿಡಿಯುವುದನ್ನೇ ನಿಲ್ಲಿಸಿ ಎಂದು ಹೇಳಲು ಸಾಧ್ಯವಿಲ್ಲ. ಆದರೆ ಮೀನುಗಾರರಿಗೆ ಯಾವ ಮೀನನ್ನು, ಯಾವ ಬಲೆಯನ್ನು  ಉಪಯೋಗಿಸಿ ಹಿಡಿದರೆ, ಅದಕ್ಕೆ ಮಾರುಕಟ್ಟೆಯಲ್ಲಿ ಬೇಡಿಕೆ ಮತ್ತು ಬೆಲೆ ಇದೆ ಎಂದು ತಿಳಿಸಬಹುದು.

 

ಮಾರುಕಟ್ಟೆಯಲ್ಲಿ ಅನೇಕ ಬಲೆಗಳು  ಲಭ್ಯವಿದ್ದು , ಒಂದೊಂದು ಮಾದರಿಯ ಬಲೆಗಳೂ  ಒಂದೊಂದು ಗಾತ್ರದ ಮೀನನ್ನು ಹಿಡಿಯಬಲ್ಲುದು. ಗ್ರಾಹಕರಾದ ನಾವು  ಮೀನುಗಳ ಸಂತಾನೋತ್ಪತ್ತಿ ಸಮಯವನ್ನು ಅರಿತು, ಮೀನುಗಾರರಿಗೆ ಯಾವ ಸಮಯದಲ್ಲಿ ಯಾವ ಬಲೆಗಳನ್ನು  ಉಪಯೋಗಿಸಿದರೆ ಉತ್ತಮ ಎಂದು ಸಲಹೆ ಕೊಡಬಹುದು. ಹಾಗೆಂದು ಪದೇ ಪದೇ ನಾವುಗಳು ಸಲಹೆಗಳನ್ನೇ ಕೊಡುತ್ತಾ ಹೋದರೆ, ಮೀನುಗಾರರಿಗೆ ನಮ್ಮ ಸಲಹೆಗಳೇ ರಗಳೆಯಾಗಬಹುದು.  ನಮ್ಮ ಸಲಹೆಗಳು, ಅವರಿಗೆ ಆರ್ಥಿಕವಾಗಿ ಲಾಭದಾಯಕವಾಗಿ ಕೂಡಾ ಇರಬೇಕು.

 

ಹಾಗಾದರೆ  ನಾವು ಯಾರಿಗೆ ಮನವರಿಕೆ ಮಾಡಿಸಬೇಕು?

 

ಮೀನುಗಾರಿಕಾ ಇಲಾಖೆ ಮತ್ತು ನಿರ್ವಾಹಕರು - ಸಹಾಯಧನದ ಮೂಲಕ ಸಮುದ್ರಕ್ಕೆ  ಆಗುತ್ತಿರುವ ಕೆಲವು ಅಪಾಯಗಳನ್ನು ಕಮ್ಮಿ ಮಾಡುವುದು.

ಈ ವಿಷಯದ ಕುರಿತು “ ನಿಮ್ಮ ಮೀನಿನ ಕುರಿತು ತಿಳಿದುಕೊಳ್ಳಿ “ ತಂಡದ ಸದಸ್ಯರು ಕೆಲಸದಲ್ಲಿ ನಿರತರಾಗಿದ್ದಾರೆ.

ಸಮುದ್ರ ಮೀನುಗಳ ಗ್ರಾಹಕರು  - ಇವರುಗಳು ತಮ್ಮ ಇಚ್ಛೆಯನ್ನು ವ್ಯಕ್ತಪಡಿಸಬಹುದು ಮತ್ತು ಮೀನುಗಾರರಿಗೆ ತಮಗೇನು ಬೇಕು ಎಂಬ ಬೇಡಿಕೆಯನ್ನು ಸಲ್ಲಿಸಿ ಅಗತ್ಯ ಮೀನುಗಳನ್ನು ಮಾತ್ರ ಹಿಡಿಯುವಂತೆ ಮಾಡಬಹುದು.

 

ನಿಮ್ಮ ಮೀನುಗಳ ಕುರಿತು ತಿಳಿದುಕೊಳ್ಳಿ ಎಂಬ ಶಿಫಾರಸ್ಸು ನಮ್ಮ ಆಯ್ಕೆಗೆ ಇರಕಬೇಕಾದ ಸೂಕ್ಷ್ಮತೆಗಳನ್ನು ಅರಿತು ಮಾಡಲಾಗಿದೆ.  ನೀವು ನಮ್ಮ ಶಿಫಾರಸ್ಸುಗಳನ್ನು  ನಮ್ಮ ಕ್ಯಾಲೆಂಡರಗಳಲ್ಲಿ ಓದಬಹುದು.

Q.

ಸಾಕಿದ ಸೀಗಡಿಗಳನ್ನು ತಿನ್ನುವುದು ಸೂಕ್ತವೇ?

A.

ಸೀಗಡಿಗಳನ್ನು ಅತ್ಯಂತ ಅಪಾಯಕಾರಿ ಪದ್ಧತಿಯಾದ ಟ್ರಾವ್ಲಿಂಗ್  ಮೂಲಕ ಹಿಡಿಯಲಾಗುತ್ತದೆ. ಟ್ರಾವ್ಲಿಂಗ್ ಮೂಲಕ ಸೀಗಡಿಗಳನ್ನು ಹಿಡಿಯುವಾಗ ಅದರ ಜೊತೆಗೆ ಮಾರುಕಟ್ಟೆಯಲ್ಲಿ ಬೇಡಿಕೆಯೇ ಇಲ್ಲದ ಇತರೆ ಮೀನುಗಳು ಮತ್ತು ಇತರೆ ಸಮುದ್ರ ಜೀವಿಗಳೂ  ಹಿಡಿಯಲ್ಪಡುತ್ತವೆ. ಹಾಗಾಗಿ ಈ ಟ್ರಾವ್ಲಿಂಗ್ ಭಾರಿ ಹಾನಿಯನ್ನೇ ಮಾಡುವುದಲ್ಲದೆ ಸಮುದ್ರ ತಟದ ಆವಾಸಸ್ಥಾನವನ್ನೂ ಹಾಳುಮಾಡುತ್ತದೆ.

 

ಇಂಥಾ ಸನ್ನಿವೇಶವನ್ನು ಗಮನಿಸಿದಾಗ ಸೀಗಡಿ  ಕೃಷಿ ಮಾಡಿ , ಅದರಲ್ಲಿ ಉತ್ಪನ್ನವಾಗುವ ಸೀಗಡಿಗಳನ್ನು ತಿನ್ನುವುದು ಬದಲಿ ವ್ಯವಸ್ಥೆಯಾಗಿದೆ. ಟ್ರಾವ್ಲಿಂಗ್ ಮಾಡದೆ, ಸಾಕಿರುವ ಸಿಗಡಿಯನ್ನು ತಿನ್ನುವುದು ಉತ್ತಮ. ಆದರೆ ಸೀಗಡಿಗಳನ್ನು ಸಾಕಲು, ಅವಕ್ಕೆ ಆಹಾರವಾಗಿ ಕೊಡುತ್ತಿರುವುದು ಸಮುದ್ರ ಮೀನುಗಳಿಂದ ಮಾಡಿದ ಆಹಾರಗಳನ್ನೇ. ಸೀ ಫುಡ್  ಎಂಬ ಹೆಸರಿನ ಎಲ್ಲಾ ಉತ್ಪನ್ನಗಳು, ಟ್ರಾವ್ಲಿಂಗ್  ಮೂಲಕ ಸೀಗಡಿ  ಹಿಡಿಯುವಾಗ ಸಿಕ್ಕಿಹಾಕಿಕೊಂಡ ಇತರೆ ಜಲಚರಗಳನ್ನು ಬಳಸಿ ಮಾಡಿದ ಆಹಾರವಾಗಿದೆ ! 

 

ತಾತ್ಪರ್ಯವೇನೆಂದರೆ ನಾವು ತಿನ್ನುವ ಎಲ್ಲಾ ಸೀಗಡಿಗಳು  ಕೂಡಾ, ಸಮುದ್ರದಮೇಲೆ ಒತ್ತಡವನ್ನೇ ಹೇರುತ್ತಿದೆ ಮತ್ತು ಸೀಗಡಿ  ಕೃಷಿಯನ್ನು ಬೆಂಬಲಿಸುವ ಮೂಲಕ ನಾವು ಮತ್ತೆ ಪುನಃ ಸಮುದ್ರದಲ್ಲಿನ ಬೇಟೆಗೆ ಉತ್ತೇಜನವನ್ನೇ ಕೊಡುತ್ತಿದ್ದೇವೆ.

Q.

ಸುಮುದ್ರ ಮೂಲದ, ಆಹಾರದ ನನ್ನ ಆಯ್ಕೆ ಹೇಗೆ ಅತಿ ಮೀನುಗಾರಿಕೆಗೆ ಬದಲಾವಣೆ ತರಬಲ್ಲುದು?

A.

ಇದು ನಮ್ಮ ರೋಗನಿರೋಧಕ ಲಸಿಕೆಗಳ ಹಾಗೆ. ಲಸಿಕೆ ಪಡೆದುಕೊಳ್ಳುವುದು ಅವರವರ ಆಯ್ಕೆ. ಒಬ್ಬ ಮನುಷ್ಯ ಲಸಿಕೆಯನ್ನು ತೆಗೆದುಕೊಂಡರೆ ಸಾಂಕ್ರಾಮಿಕ ರೋಗವನ್ನು ತಡೆಗಟ್ಟಲು ಸಾಧ್ಯವಿಲ್ಲ. ಆದರೆ ಒಬ್ಬ ತೆಗೆದುಕೊಂಡರೆ, ಅವನ ಸುತ್ತಲಿನ ಜನರು ಲಸಿಕೆ ತೆಗೆದುಕೊಳ್ಳಲು ಕಾರಣವನ್ನು ಕೇಳುತ್ತಾರೆ. ಲಸಿಕೆಯ ಮಹತ್ವ ತಿಳಿದಮೇಲೆ ಉಳಿದವರೂ  ಲಸಿಕೆಯನ್ನು ಪಡೆಯುತ್ತಾರೆ. ಲಸಿಕೆ ಪಡೆದುಕೊಂಡ ವರ್ಗ ಮತ್ತೆ ಅನೇಕರಿಗೆ ಪ್ರೇರಣೆಯಾಗುತ್ತಾರೆ. ಹೀಗೆ ಬಹುತೇಕರು ಲಸಿಕೆ ಪಡೆದುಕೊಂಡಾಗ ಸಾಂಕ್ರಾಮಿಕ ಕಾಯಿಲೆಯು ಹರಡುವುದು ನಿಯಂತ್ರಣಕ್ಕೆ ಬರುತ್ತದೆ.

 

ಇದೇ  ರೀತಿಯಗಿ  ನಾವು ಜವಾಬ್ಧಾರಿಯುತವಾಗಿ ಸಮುದ್ರದ ಮೀನುಗಳನ್ನು ತಿಂದರೂ  ಆಗುತ್ತದೆ. ನಮ್ಮ ಆಯ್ಕೆಯನ್ನು ಇತರರಗೆ ತಿಳಿಸಿದರೆ, ಯಾಕಾಗೆ ನಾವು ಹೀಗೆ ಆಯ್ಕೆ ಮಾಡಿದೆವು ಎಂದು ಮನವರಿಕೆ ಮಾಡಿದರೆ, ಅದು ಲಸಿಕೆಗಳು ಪರಿಣಾಮಕಾರಿಯಾದಂತೆಯೇ ಕಾರ್ಯ ನಿರ್ವಹಿಸುತ್ತದೆ. ಒಬ್ಬನ ಆಯ್ಕೆ ಮೀನುಗಾರಿಕೆಯ ಮೇಲೆ ಯಾವ ಪರಿಣಾಮವನ್ನೂ  ಬೀರುವುದಿಲ್ಲ. ಆದರೆ ಅವನೊಬ್ಬನ ಪ್ರೇರಣೆ ಇತರರಿಗೂ ಸಮುದ್ರ ಮೀನಿನ ಕ್ಯಾಲೆಂಡರ್ ಉಪಯೋಗಿಸಲು ಪ್ರೇರರಣೆಯಾಗಬಲ್ಲುದು. ಹೀಗೆ ಎಲ್ಲರೂ  ಅರಿತುಕೊಂಡಾಗ ಸಮುದ್ರದ ಮೇಲಿನ ಒತ್ತಡ ತನ್ನಿಂತಾನೇ ಕಡಿಮೆಯಾಗುತ್ತದೆ.

Q.

ಸಮುದ್ರ ಮೀನಿನ ಬೇಡಿಕೆಗೆ ಗ್ರಾಹಕರ ಪಾತ್ರವಿದೆಯೇ?

A.

ಭಾರತದಲ್ಲಿ ಶ್ರಾವಣ ಮಾಸ ಅಥವಾ ಗಣಪತಿ ಹಬ್ಬದ ಸಮಯವನ್ನೇ ಗಮನಿಸಿ (ಆಗಸ್ಟ್ - ಸೆಪ್ಟೆಂಬರ ). ಈ ತಿಂಗಳುಗಳು ಪವಿತ್ರ ಎಂಬ ಭಾವನೆ ಇದ್ದು  ಅನೇಕರು ಈ ಸಮಯದಲ್ಲಿ ಮೀನನ್ನು ತಿನ್ನಲು ಇಚ್ಛಿಸುವುದಿಲ್ಲ. ಹಾಗಾಗಿ ಮೀನುಗಾರರೂ  ಕೂಡ ಈ ಸಮಯದಲ್ಲಿ ಹೆಚ್ಚಿಗೆ ಸಮುದ್ರಕ್ಕೆ ಹೋಗುವುದಿಲ್ಲ.

 

ಅದೇ ರೀತಿ, ಕ್ರಿಸ್ಮಸ್ ಮತ್ತು ಹೊಸ ವರ್ಷದ ಆಚರಣೆಯ ಸಮಯದಲ್ಲಿ ಮೀನುಗಳಿಗೆ ಅತಿಯಾದ ಬೇಡಿಕೆ ಇರುತ್ತದೆ. ಇಂಥಾ ಸಮಯದಲ್ಲಿ ಮೀನುಗಾರರು ಕೂಡಾ ಬೇಡಿಕೆಗೆ ಅನುಸಾರವಾಗಿ ಹೆಚ್ಚಿಗೆ ಮೀನುಗಳನ್ನು ಹಿಡಿಯುತ್ತಾರೆ. ಈ ಎರಡೂ  ಉದಾಹರಣೆಗಳು ನಮ್ಮ ಬೇಡಿಕೆಗಳು ಹೇಗೆ ಮೀನಿನ ಬೇಟೆಯ ಮೇಲೆ ಪರಿಣಾಮ ಬೀರುತ್ತದೆ ಎಂದು ತಿಳಿಸುತ್ತದೆ.

 

ನಾವು ಒಬ್ಬನ ಜೀವನ ಶೈಲಿಯಲ್ಲಿ ಆದ ಬದಲಾವಣೆಯ ಶಕ್ತಿಯನ್ನು ಕಡೆಗಣಿಸಲಾಗದು. ಇಂಥಾ ಬದಲಾವಣೆಯು ಭಾರೀ  ಪರಿವರ್ತನೆಯನ್ನೇ ಮಾಡಬಲ್ಲುದು. ನಾವು ಮಾಡಿರುವ “ ನಿಮ್ಮ ಮೀನಿನ ಕುರಿತು ತಿಳಿದುಕೊಳ್ಳಿ “ ಎಂಬ ಕ್ಯಾಲೆಂಡರ್ , ನೀವು ಹೇಗೆ ಅದನ್ನು ಬಳಸುತ್ತೀರಿ ಎಂಬುದರ ಮೇಲೆ ಮತ್ತು ನೀವು ಅದನ್ನು ಹೇಗೆ ಇತರರೊಂದಿಗೆ ಹಂಚಿಕೊಳ್ಳುತ್ತೀರಿ ಎಂಬುದರ ಮೇಲೆಯೇ ಅವಲಂಭಿತವಾಗಿದೆ. ಅತಿ ಮೀನುಗಾರಿಕೆಯ ಸಮಸ್ಯೆಯನ್ನು ಎದುರಿಸುವುದು ಕೇವಲ ಮೀನುಗಾರರ, ವಿಜ್ಞಾನಿಗಳ ಮತ್ತು  ನೀತಿ ನಿರೂಪಕರ ಜವಾಬ್ಧಾರಿಯಲ್ಲ. ಇದರಲ್ಲಿ ಗ್ರಾಹಕರಾಗಿ ನಮ್ಮ ಜವಾಬ್ಧಾರಿಯೂ  ಸಾಕಷ್ಟಿದೆ.

Q.

ಎಲ್ಲಾ ಮೀನುಗಳು ಮಳೆಗಾಲದಲ್ಲಿ ಸಂತಾನೋತ್ಪತ್ತಿ ಮಾಡುತ್ತವಾ? ಹಾಗಾದರೆ ಭಾರತದಲ್ಲಿ  ಮುಂಗಾರು ಹೊತ್ತಿಗೆ ಮೀನುಗಾರಿಕೆ ನಿಷೇಧವೇಕೆ?

A.

ಎಲ್ಲಾ ಮೀನುಗಳು ಮುಂಗಾರಿನ ಸಮಯದಲ್ಲಿ ಸಂತಾನೋತ್ಪತ್ತಿ ಮಾಡುವುದಿಲ್ಲ. “ ನಿಮ್ಮ ಮೀನಿನ ಕುರಿತು ತಿಳಿದುಕೊಳ್ಳಿ “ ಎಂಬ ಕ್ಯಾಲೆಂಡರ್ ಮಾಡುವಾಗ ನಾವು ಒಟ್ಟು 86 ಪ್ರಭೇದದ ಮೀನುಗಳ ಜೀವನ ಚಕ್ರವನ್ನು ಗಮನಿಸಿದ್ದೇವೆ. ಅದರಲ್ಲಿ ಕೇವಲ 17  ಮೀನುಗಳು ಮಾತ್ರ ಮಳೆಗಾಲದಲ್ಲಿ ಸಂತಾನೋತ್ಪತ್ತಿ ಮಾಡುತ್ತವೆ ಎಂದು ತಿಳಿದುಬಂದಿದೆ.

 

ಭಾರತ ಪಶ್ಚಿಮ ಕರಾವಳಿಯ ಎಲ್ಲಾ ರಾಜ್ಯಗಳು ಮುಂಗಾರು ಮಳೆಯ ಸಮಯದಲ್ಲಿ ಮೀನುಗಾರಿಕೆಯನ್ನು ನಿಷೇಧಿಸಿದೆ. ಯಾರು ಸಮುದ್ರಕ್ಕೆ ಇಳಿಯಬಹುದು ಮತ್ತು ಇಳಿಯಬಾರದು ಎಂಬ ನಿರ್ಧಾರ ಆಯಾಯ ರಾಜ್ಯಗಳಿಗೆ ಬಿಟ್ಟ ವಿಷಯ. ಸಣ್ಣ ಪ್ರಮಾಣದಲ್ಲಿ ಮೀನುಗಾರಿಕೆ ಮಾಡುವ ದೋಣಿಗಳು ಈಗಿನ ಅತ್ಯಾಧುನಿಕ ಯಾಂತ್ರಿಕ ಹಡಗುಗಳೊಂದಿಗೆ ಪೈಪೋಟಿ ನಡೆಸಲು ಸಾಧ್ಯವಿಲ್ಲ.  ಹಾಗಾಗಿ ಸಣ್ಣ ಪ್ರಮಾಣದ ಮೀನುಗಾರರ ಒತ್ತಡಕ್ಕೆ ಮಣಿದು ಸರಕಾರಗಳು ಈ ನಿರ್ದಾರಕ್ಕೆ ಬಂದಿದೆ.  ಹಾಗಾಗಿ ಮಳೆಗಾಲದ ಈ ನಿಷೇಧಕ್ಕೂ ಸಂತಾನೋತ್ಪತ್ತಿಗೂ ಯಾವ ಸಂಬಂಧವೂ  ಇಲ್ಲ. ಈ ನಿಷೇಧ ಸಣ್ಣ ಪ್ರಮಾಣದ ಮೀನುಗಾರರ ಹಿತ ಕಾಯ್ದುಕೊಳ್ಳಲು ಮಾಡಿರುವ ನಿರ್ಧಾರವಷ್ಟೇ. ಈ ನಿಷೇಧದ ನಂತರ ಕಡಿಮೆ ಪ್ರಮಾಣದಲ್ಲಿ ಆದ ಮೀನುಗಾರಿಕೆಯಿಂದ ಸಮುದ್ರದಲ್ಲಿ ಮೀನುಗಳ ಸಂಖ್ಯೆಯಲ್ಲಿ ಕಂಡ ಏರಿಕೆಯನ್ನು ಗಮನಿಸಲಾಯಿತು.

 

ಮಳೆಗಾಲದಲ್ಲಿ ಮೀನುಗಾರಿಕೆ ನಿಷೇಧವಾದುದರಿಂದ ಆ ಹದಿನೇಳು ಮೀನುಗಳ ಪಾಲಿಗೆ ವರದಾನವಾಯಿತು. ಸುಮಾರು 45-60 ದಿನಗಳ ಮೀನುಗಾರಿಕಾ ವಿರಾಮ ಅನೇಕ ಜಲಚರಗಳ ಉಳಿವಿಗೂ ಕಾರಣವಾಯಿತು.

Q.

ನಾನು ಮೀನನ್ನು ಖರೀಧಿಸುವಾಗ ಅದರ ಗಾತ್ರ ಏನಾದರೂ ಮಹತ್ವ ಪಡೆದಿದೆಯೇ?

A.

2010ಕ್ಕೆ ಮೊದಲು ಅತ್ತರಿಸುತ್ತಿದ್ದರೆ ಹೌದು ಎನ್ನಬಹುದಾಗಿತ್ತು. ಸಣ್ಣ ಮೀನುಗಳನ್ನು ಹಿಡಿಯದಿದ್ದರೆ ಒಳಿತು ಎಂದು ಹೇಳಲಾಗುತ್ತಿತ್ತು.

ಆದರೆ ಇತ್ತೀಚೆಗಿನ ಅಧ್ಯಯನಗಳು  “ ಸಮತೋಲಿತ ಕೊಯ್ಲು ಸಿದ್ಧಾಂತ “ ವನ್ನು ಸೂಚಿಸುತ್ತದೆ. ಅಂದರೆ ಸಣ್ಣ/ ಮರಿ ಮಿನುಗಳು ಸಾಯುವುದರಿಂದ, ಆ ಮೀನಿನ ಸಂತಾನದ ಮೇಲೆ ಅಂಥಾ ಪ್ರಭಾವೇನೂ ಪರಿಣಮಿಸುವುದಿಲ್ಲ. ಈ ವಿಷಯವಾಗಿ ಚರ್ಚೆಗಳು  ಮೀನುಗಾರಿಕಾ ವಲಯದಲ್ಲಿ ಇನ್ನೂ ಆಗುತ್ತಿವೆ.

 

ಈ ಬೆಳವಣಿಗೆಗಳ ಆಧಾರದಲ್ಲಿ, ನಾವು ನಮ್ಮ ಶಿಫಾರಸ್ಸುಗಳನ್ನು ಮೀನುಗಳ ಸಂತಾನೋತ್ಪತ್ತಿ ಸಮಯಕ್ಕಷ್ಟೇ ನಿರ್ಬಂಧಿಸಿಕೊಂಡಿದ್ದೇವೆ. ಸದ್ಯಕ್ಕೆ ಮೀನಿನ ಗಾತ್ರದ ಕುರಿತು ಯಾವ ಅಭಿಪ್ರಾಯವನ್ನೂ  ವ್ಯಕ್ತಪಡಿಸಿಲ್ಲ.

 

ಶಾರ್ಕ್ ಮೀನುಗಳ ಕುರಿತಷ್ಟೇ ನಾವು ನಿಶ್ಚಿತ  ಅಭಿಪ್ರಾಯವನ್ನು ಹೊಂದಿದ್ದೇವೆ. ಶಾರ್ಕ್ ಮೀನುಗಳು ಇತರೆ ಮೀನುಗಳಂತೆ ಅಧಿಕ ಸಂಖ್ಯೆಯಲ್ಲಿ ಮರಿಗಳನ್ನು ಹೊಂದಿರುವುದಿಲ್ಲ. ಹಾಗಾಗಿ ಶಾರ್ಕ್ ಮೀನುಗಳ ಮರಿಗಳ ಹನನದಿಂದ ಅವುಗಳ ಸಂಖ್ಯೆಯ ಮೇಲೆ ಭಾರಿ ಪರಿಣಾಮವನ್ನು ಮಾಡಬಹುದು. ಹಾಗಾಗಿ ನಾವು ಶಾರ್ಕ್ ಮೀನುಗಳನ್ನು ತಿನ್ನಲು ಶಿಫಾರಸ್ಸೇ ಮಾಡುವುದಿಲ್ಲ. ಹಾಗೂ ತಿನ್ನಲೇ ಬೇಕು ಎಂದು ಯಾರಾದರೂ ಬಯಸಿದಲ್ಲಿ ಕನಿಷ್ಠ ಪಕ್ಷ ಶಾರ್ಕ್ ಮರಿಗಳನ್ನಾದರೂ ತ್ಯಜಿಸಿ.

Q.

ಶೀತಲೀಕರಿಸಿದ ಮೀನುಗಳನ್ನು  “ತಿನ್ನಬಾರದ್ದು” ಎಂದು ನಮೂದಿಸಿದ ಸಮಯದಲ್ಲಿ ತಿನ್ನಬಹುದೇ ?

ಋತು?

A.

ಯಾವಾಗ ಆ ಮೀನನ್ನುಹಿಡಿಯಲಾಗಿತ್ತು  ಹಿಡಿಯಲಾಗಿತ್ತು ಎಂಬುದೇ ಇಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತದೆ. ಮೀನು ಹಿಡಿದ ಋತು “ ತಿನ್ನಬಹುದಾದ”  ಎಂಬ ವಿಭಾಗದಲ್ಲಿದೆಯೋ ಅಥವಾ “ ತಿನ್ನಬಾರದ್ದು ” ಎಂಬ ವಿಭಾಗದಲ್ಲಿದೆಯೋ ಎಂಬುವುದೇ ಇಲ್ಲಿ ನಿರ್ಣಾಯಕ. ಆ ಮಾಹಿತಿಯು ನಿಮಗೆ ಪ್ಯಾಕೆಜಿಂಗಿನಲ್ಲಿ ಸಿಗುತ್ತದೆ. ಅದರ ಅನುಗುಣವಾಗಿ ನೀವು ತಿನ್ನುವ ಆಯ್ಕೆ ಮಾಡಿ. ಅಕಸ್ಮಾತ್ ಆ ಮಾಹಿತಿಯು ಲಭ್ಯವಿಲ್ಲದೇ  ಹೋದರೆ ತಿನ್ನದಿರುವುದೇ ಒಳಿತು.

Q.

“ನಿಮ್ಮ ಮೀನಿನ ಕುರಿತು ತಿಳಿದುಕೊಳ್ಳಿ”  ಕ್ಯಾಲೆಂಡರ್ರಿನ,“ ತಿನ್ನಬಹುದಾದ”  ವಿಭಾಗದ ಅನುಸಾರ ಕೊಂಡುಕೊಂಡ ಮೀನಿನಲ್ಲಿ ನಾನ್ಯಾಕೆ ಮೊಟ್ಟೆಗಳನ್ನು ಕಂಡೆ?

A.

ಇದಕ್ಕೆ ಅನೇಕ ಕಾರಣಗಳಿರಬಹುದು .

 

೧. ಅನೇಕ ಮೀನುಗಳಿಗೆ ವರ್ಷ ಪೂರ್ತಿ ಸಂತಾನೋತ್ಪತ್ತಿ ಸಮಯ ವಿಸ್ತರಿಸಿರುತ್ತದೆ. ವರ್ಷ ಪೂರ್ತಿ ಆ ಮೀನನ್ನು ತಿನ್ನಲೇಬೇಡಿ ಎಂದು ನಾವು ಹೇಳಿದರೆ, ಅದನ್ನು ಪಾಲಿಸುಲು ಸಾಧ್ಯವಿಲ್ಲ. ಹಾಗಾಗಿ ಅಂಥಾ ಮೀನುಗಳನ್ನು ನಾವು, ಯಾವಾಗ ಅದರ ಸಂತಾನೋತ್ಪತ್ತಿ ಸಮಯ ಹೆಚ್ಚಿರುತ್ತದೆಯೋ ಆಗ ತಿನ್ನಬೇಡಿ ಎಂದು ಶಿಫಾರಸ್ಸು ಮಾಡಿದ್ದೇವೆ. ಈ ಕಾರಣದಿಂದಾಗಿ ನಿಮಗೆ “ ತಿನ್ನಬಹುದಾದ”  ವಿಭಾಗದಲ್ಲಿ  ಮೊಟ್ಟೆ ಇರುವ ಮೀನು ಕಾಣಿಸಿಕೊಂಡಿರಬಹುದು .

 

೨. ನಮ್ಮ ಶಿಫಾರಸ್ಸು ಏನಿದ್ದರೂ  ಕಳೆದ ಎಪ್ಪತ್ತು ವರ್ಷಗಳ ಅಧ್ಯಯನದ ಆಧಾರದಿಂದಲೇ ರಚಿತವಾಗಿದೆ. ಅನೇಕ ಡೇಟಾಗಳು  ಅಪೂರ್ಣವಾಗಿದ್ದು, ನಮ್ಮ ಶಿಫಾರಸ್ಸು ಕೂಡಾ ಅಪೂರ್ಣವಿರಬಹುದು.

 

೩. ಹವಾಮಾನ ವೈಪರೀತ್ಯ ಮತ್ತು ಅತಿಯಾದ ಮೀನುಗಾರಿಕೆಯಿಂದ ಮೀನುಗಳೂ  ತಮ್ಮ ಸಂತಾನೋತ್ಪತ್ತಿ ಸಮಯವನ್ನೇ ಬದಲಿಸಿಕೊಂಡಿರಬಹುದು.

Q.

ಸಮುದ್ರದ ಮೀನುಗಳನ್ನು ತಿನ್ನದೇ ಇರುವುದೇ, ಸಮುದ್ರದ ಪಾರಿಸಾರಿಕ ವ್ಯವಸ್ಥೆಯನ್ನು ಕಾಪಾಡಲು ಪರಿಹಾರವಲ್ಲವೇ?

A.

ವಯ್ಯಕ್ತಿಕವಾಗಿ ಈ ನಿರ್ಧಾರ ಉತ್ತಮವಾದದ್ದೇ.ಪ್ರತಿಯೊಬ್ಬನ ಇಂಥಾ ನಿರ್ಧಾರ ಅಷ್ಟು ಅಷ್ಟು ಸಂರಕ್ಷಣೆ ಮಾಡುವುದರಲ್ಲಿ ಯಾವ ಸಂಶಯವೂ ಇಲ್ಲ. ಇದನ್ನೇ ಸರಿ ಎಂದು ಪ್ರತಿಪಾದಿಸಿ ಎಲ್ಲರು ಒಮ್ಮೆಲೇ ಸಮುದ್ರದ ಮೀನುಗಳನ್ನು ತಿನ್ನುವುದನ್ನು ಸಂಪೂರ್ಣ ಬಿಟ್ಟರೂ ಎಂದಿಟ್ಟುಕೊಳ್ಳೋಣ. ಆಗ ಈ ಕೆಳಗಿನ ಕೆಲ ಪ್ರಶ್ನೆಗಳಿಗೆ ನಾವು ಉತ್ತರವನ್ನು ಕಂಡುಕೊಳ್ಳಬೇಕಾಗುತ್ತದೆ.

ಭಾರತದಲ್ಲಿ ಸಮುದ್ರದ ಮೀನುಗಳು ಪ್ರಮುಖ ಆಹಾರಗಳಲ್ಲಿ ಒಂದಾಗಿದ ಮತ್ತು ಮೀನುಗಾರಿಕೆ ಮಿಲಿಯಗಟ್ಟಲೆ ಜನರ ಉದ್ಯೋಗವೂ ಆಗಿದೆ. ನಾವು ಸಮುದ್ರ ಉತ್ಪನ್ನಗಳನ್ನು ಬಿಡಿ ಎಂದು ಪ್ರತಿಪಾದಿಸುವಾಗ ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರಿಸಬೇಕಾಗುತ್ತದೆ.

 

೧. ಮೀನುಗಳನ್ನು ತಿನ್ನುತ್ತಿರುವವರಿಗೆ ಬದಲಿ ಆಹಾರವೇನು?

೨. ಈ ಬದಲಿ ಆಹಾರವು ನೆಲಮೂಲದ್ದೇ?

೩. ಮೀನುಗಾರಿಕೆಯನ್ನೇ ನಿಲ್ಲಿಸಿದ ಪಕ್ಷದಲ್ಲಿ ಅದನ್ನೇ ಜೀವನಾಧಾರವಾಗಿ ನೆಚ್ಚಿಕೊಂಡಿರುವ ವರ್ಗಕ್ಕೆ ಬೇರೆ ಉದ್ಯೋಗವನ್ನು ಸೃಷ್ಟಿಸಲಾದೀತೇ?

ಈ ಮೇಲಿನ ಪ್ರಶ್ನೆಗಳಿಗೆ ನಮಗೆ ಉತ್ತರವಾಗಲೀ ವೈಜ್ಞಾನಿಕ ಆಧಾರವಿರುವ ಯಾವ ಉಲ್ಲೇಖಗಳು ಸಿಗಲಿಲ್ಲ. ನಿಮಗೆ ಈ ವಿಷಯದ ಕುರಿತು ಅಭಿಪ್ರಾಯಯವಿದ್ದಲ್ಲಿ ಅಥವಾ ವೈಜ್ಞಾನಿಕ ಆಧಾರ ಲಭ್ಯವಿದ್ದಲ್ಲಿ ನಮಗೆ ತಿಳಿಸಿ.

 

ಅದೂ ಅಲ್ಲದೆ ಇಲ್ಲಿ ನೈತಿಕತೆಯ ಪ್ರಶ್ನೆ ಉದ್ಭವಿಸುತ್ತದೆ. ತೀರಾ ಆದರ್ಶವಾಗಿ ನೋಡುವುದಾದರೆ ಮಾನವನು ಯಾವ ಜೀವಿಗೂ, ಯಾವ ಹಾನಿಯನ್ನೂ ಮಾಡಬಾರದು.  ಅದು, ಗಿಡ, ಮರ, ಪ್ರಾಣಿ, ಪಕ್ಷಿ, ಕೀಟ, ಫಂಗಸ್, ಬ್ಯಾಕ್ಟೀರಿಯಾ, ಹೀಗೆ. ಎಲ್ಲದಕ್ಕೂ ಜೀವವಿದೆ, ಎಲ್ಲವಕ್ಕೂ ಅದರದ್ದೇ ಬದುಕಿದೆ. ಈ ತತ್ವವನ್ನು ತೆಗೆದುಕೊಂಡರೆ ಯಾರಿಗೂ ಬದುಕಲು ಸಾಧ್ಯವಿಲ್ಲ. ಹಾಗಾಗಿ ಪ್ರಕೃತಿಯಲ್ಲಿ ಪರಸ್ಪರ ಅವಲಂಭನೆ ಇದ್ದೆ ಇದೆ. ಮನುಷ್ಯನನ್ನು ತೆಗೆದು ಕೊಂಡರೆ, ಅವನ ಆಹಾರ ಯಾವುದು ಎಂದು ನಿರ್ಧರಿಸುವುದು ಕಷ್ಟ. ನಮ್ಮ ಮೂಗಿನ ನೇರಕ್ಕೆ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ. ಹಾಗಾಗಿ ಸಮುದ್ರದ ಮೀನನ್ನು ತಿನ್ನಲೇ ಬೇಡಿ ಎಂದು ಪ್ರತಿಪಾದಿಸಲೂ ಸಾಧ್ಯವಿಲ್ಲ.

 

ಹಾಗಾಗಿ, ಸಮುದ್ರ ಮೂಲದ ಆಹಾರವನ್ನು ಪೂರ್ತಿ ತ್ಯಜಿಸಿ ನೆಲ ಮೂಲದ ಆಹಾರವನ್ನೇ ತಿನ್ನಿ ಎಂದು ಹೇಳಿದರೆ ಅದು ಪರಿಹಾರವಾಗಬಲ್ಲುದೇ?  ಮತ್ತು ಸಮುದ್ರ ಆಹಾರವನ್ನು ತ್ಯಜಿಸಿದರೆ ಅದ್ಕಕಿಂತ ಒಳ್ಳೆಯ ನೈತಿಕ ಆಹಾರ ಯಾವುದು ಎಂದು ನಿರ್ಧರಿಸುವುದು ಕೂಡಾ ಕಷ್ಟ.

ಇದನ್ನೆಲ್ಲಾ ನಾವು ಗಮನದಲ್ಲಿಟ್ಟು, ಸಮುದ್ರ ಮೀನುಗಳನ್ನು ತಿನ್ನಬೇಡಿ ಎಂದು ಹೇಳದೆ, ಸಮುದ್ರದ ಒಳಗಿನ ಪರಿಸರ, ಅದರೊಳಗಿನ ಜೀವಿಗಳು, ಅವುಗಳ ಜೀವನ ಚಕ್ರ, ಸಧ್ಯ ಹವಾಮಾನ ವೈಪರೀತ್ಯ ಮತ್ತು ಪರಿಸರ ಮಾಲಿನ್ಯದಿಂದ ಸಮುದ್ರಕ್ಕೆ ಆಗುತ್ತಿರುವ ಪರಿಣಾಮದ ಕುರಿತು ಸಾರ್ವಜನಿಕರಿಗೆ ಅರಿವು ಮೂಡಿಸುವುದು ಮತ್ತು ಜನರನ್ನು ಈ ಕೆಲಸದಲ್ಲಿ ತೊಡಗಿಸಿಕೊಂಡರೆ, ಸಮುದ್ರಕ್ಕೆ ನಮ್ಮಿಂದ ಆಗುವು ಸ್ವಲ್ಪ ಹೊರೆಯಾದರೂ ಕಮ್ಮಿಯಾಗಬಹುದೆಂಬ ಭಾವ ನಮ್ಮದು.

Q.

“ನಿಮ್ಮ ಮೀನಿನ ಕುರಿತು ತಿಳಿದುಕೊಳ್ಳಿ” ಕ್ಯಾಲೆಂಡರ್ರಿನ “ ತಿನ್ನಬಹುದಾದ” ಎಂದು ನಮೂಧಿಸಿದ ವಿಭಾಗದಲ್ಲಿ ಇರುವ ಮೀನನ್ನು ಖರೀದಿಸಿದಾಗ, ಅದರಲ್ಲಿ ಮೊಟ್ಟೆಗಳಿದ್ದರೆ ನಾವೇನು ಮಾಡಬೇಕು?

A.

ನೀವು ಗಮನಿಸಿದ್ದನ್ನು ನಮ್ಮ ಗಮನಕ್ಕೆ ತನ್ನಿ. ನಿಮಗೆ ಕಂಡ ಮಾಹಿತಿಗಳನ್ನು ನಾವು ಸಮುದ್ರ ಮೀನುಗಳನ್ನು ಬಳಸುವ ಗ್ರಾಹಕರಿಗಾಗಿಯೇ ಮಾಡಿರುವ ವೇದಿಕೆಯಲ್ಲಿ ಹಂಚಿಕೊಳ್ಳಬಹುದು. ನೀವೇನು ಗಮನಿಸಿದ್ದಿರೋ ಅದನ್ನು ಕೆಳಗೆ ಕೊಟ್ಟಿರುವ ಕೊಂಡಿಯನ್ನು ಒತ್ತಿ, ಅದರಲ್ಲಿ ನಮೂದಿಸಬಹುದು. ಇತರರ ಅನುಭವಗಳನ್ನೂ  ನೀವು ಇದೇ  ಕೊಂಡಿಯ ಸಹಾಯದಿಂದ, ಮಾಹಿತಿಗಳನ್ನೂ  ಪಡೆಯಬಹುದು. ನಾವು ನಿರಂತರವಾಗಿ ನೀವು ನಮಗೆ ನೀಡುವ ಮಾಹಿತಿಯನ್ನು ಸಮೀಕ್ಷೆ ಮಾಡುತ್ತಿರುತ್ತೇವೆ.

ನೀವು ನೀಡುವ ಮಾಹಿತಿಗಳನ್ನು ಪರಿಗಣಿಸಿ, ಅದು ನಾವು ಮಾಡುವ ಶಿಫಾರಸ್ಸಿಗಿಂತ ತೀರಾ ಭಿನ್ನವಾಗಿ ಅನೇಕರಿಂದ ಮಾಹಿತಿಗಳು ಬಂದಲ್ಲಿ, ಅದಕ್ಕನುಗುಣವಾಗಿ ನಮ್ಮ ಕ್ಯಾಲೆಂಡರ್ರಿನಲ್ಲಿ ಬದಲಾವಣೆಗಳನ್ನು ಮಾಡುತ್ತೇವೆ.

bottom of page