CITIZEN SCIENCE
ಮೊಟ್ಟೆಗಳನ್ನು ಹೊಂದಿರುವ ಮೀನು ಯೋಜನೆ
ನಮ್ಮ ಶಿಫಾರಸ್ಸಿನಲ್ಲಿ , ಸಂತಾನೋತ್ಪತ್ತಿ ಸಮಯದಲ್ಲಿ, ಅಂಥಾ ಮೀನುಗಳನ್ನು ತಿನ್ನಬಾರದ್ದು ಎಂಬ ಪಟ್ಟಿಗೆ ಸೇರಿಸಿದ್ದೇವೆ
ಇಷ್ಟಾದರೂ ನಮ್ಮ ಕ್ಯಾಲೆಂಡರ್ ಉಪಯೋಗಿಸುವವರು ನಾವು ಶಿಫಾರಸ್ಸು ಮಾಡುವ ತಿಂಗಳುಗಳಲ್ಲೂ , ಅವರು ತಿನ್ನುವ ಮೀನನಲ್ಲಿ ಮೊಟ್ಟೆಗಳಿದ್ದವು ಎಂದು ವರದಿ ಸಲ್ಲಿಸಿದ್ದಾರೆ.
ಬಹುಷಃ ಕೆಲವು ಮೀನುಗಳಿಗೆ ನಿರ್ಧಿಷ್ಠ ಸಂತಾನೋತ್ಪತ್ತಿ ಸಮಯ ಇಲ್ಲದ ಕಾರಣ ಅಥವಾ ವರ್ಷ ಪೂರ್ತಿ ಸಂತಾನೋತ್ಪತ್ತಿ ಕಾಲ ಈ ಮೀನುಗಳಿಗೆ ಇರುವುದರಿಂದ ಹೀಗಾಗಿರಬಹುದು. ಅಥವಾ ಜಾಗತಿಕ ಹವಾಮಾನ ವ್ಯತ್ಯಾಸದಿಂದಲೂ ಹೀಗಾಗಿರುವ ಸಾಧ್ಯತೆಯನ್ನೂ ತಳ್ಳಿಹಾಕುವಂತಿಲ್ಲ. ( ಹೆಚ್ಚಿನ ಮಾಹಿತಿಗಾಗಿ ನಮ್ಮ 'ಸಾಮಾನವಾಗಿ ಕೇಳಲಾಗುವ ಪ್ರಶ್ನೆಗಳು' ವಿಭಾಗವನ್ನು ನೋಡಬಹುದು )
ಪ್ರಾಯಶಃ ಸಮುದ್ರ ಮೀನಿನ ಸಂತಾನೋತ್ಪತ್ತಿಯ ಸರಿಯಾದ ಮಾಹಿತಿ ಇಲ್ಲದ ಕಾರಣ ಹೀಗಾಗಬಹುದು. ನಮ್ಮ ಶಿಫಾರಸ್ಸು ಪ್ರಕಟಿಸಲಾದ ಅಧ್ಯಯನಗಳನ್ನೇ ನೆಚ್ಚಿಕೊಂಡಿದೆ. ಯಾವ ಮೀನಿನ ಕುರಿತು ಅಧ್ಯಯನಗಳು ಲಭ್ಯವಿಲ್ಲವೋ ಅಂತಹಾ ಮೀನುಗಳ ಕುರಿತಾದ ನಮ್ಮ ಮಾಹಿತಿಗಳು ಪೂರ್ಣವಿಲ್ಲ. ಹಾಗಾಗಿ ಮೀನು ಗ್ರಾಹಕರಿಗೆ ಮೀನುಗಳ ಸರಿಯಾದ ಸಂತಾನೋತ್ಪತ್ತಿ ಸಮಯ ಗೊತ್ತಾಗುವುದಿಲ್ಲ.
ಸಮುದ್ರ ಉತ್ಪನ್ನಗಳ ಗ್ರಾಹಕರಾಗಿ ನೀವು ಈ ಕುರಿತು ನಮಗೆ ಸಹಾಯಮಾಡಬಹುದು ! ನಮ್ಮ ಜನಸಾಮಾನ್ಯರ ವಿಜ್ಞಾನ ಎಂಬ ಯೋಜನೆಯ ಅಡಿಯಲ್ಲಿ ನೀವು ನಮ್ಮೊಂದಿಗೆ ಕೈ ಜೋಡಿಸಬಹುದು.
ನೀವು ಖರೀಧಿಸಿದ ಮೀನಿನಲ್ಲಿ ಮೊಟ್ಟೆಗಳು ಇದ್ದವು ಎಂದಾದರೆ ಅದನ್ನು ನೀವು ನಮ್ಮ ಈ ಗೂಗುಲ್ ಫಾರಂ ನಲ್ಲಿ ನಮೂದಿಸಿ. ಈ ಕೆಲಸಕ್ಕೆ ನಿಮಗೆ ಬೇಕಾದದ್ದು ಕೇವಲ ಒಂದು ನಿಮಿಷ ! ನೀವು ಗಮನಿಸುವ ಪ್ರತೀ ಮೀನುಗಳನ್ನು ಪ್ರತ್ಯೇಕ ಗೂಗಲ್ ಹಾಳೆಯಲ್ಲಿ ನಮೂದಿಸಬೇಕು.